Index   ವಚನ - 312    Search  
 
ಎಮ್ಮೆ ಕೋಣನ ಚರ್ಮವ ತೆಗೆದು, ಸುಣ್ಣವಿಲ್ಲದೆ ಆಕಾಶದ ರಂಜಣಿಗಿಯಲಿಕ್ಕಲು ಮೂರಾರಕ್ಕೆ ಹದ ಬಂದು, ಒಳ ಅಟ್ಟೆಗೆ ಮೂರುಹೊಲಿಗೆ, ಹೊರ ಅಟ್ಟೆಗೆ ಆರುಹೊಲಿಗೆ, ಉಂಗುಷ್ಠಕ್ಕೆ ಸೂರ್ಯನ ಹೊಲಿಗೆ, ಚಂಡಿಕೆಗೆ ಚಂದ್ರನಹೊಲಿಗೆ, ಹಿಮ್ಮಡಕ್ಕೆ ಅಗ್ನಿಯಹೊಲಿಗೆ, ಶತವೊಂದು ಬಾರ ಬಂಧಿಸಿದ ಮೆಟ್ಟು ಹಣವ ಕೊಟ್ಟೊಡೆ ಕೊಡೆ, ಮಲವ ಕೊಟ್ಟೊಡೆ ಕೊಟ್ಟು ಕಾಯಕವ ಮಾಡುತಿರ್ದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.