Index   ವಚನ - 322    Search  
 
ಚಮ್ಮಾರನಲ್ಲಿ ಮಚ್ಚೆಯ ಕೊಂಡು ಆರಿಗೂ ಸಿಕ್ಕದೆ ಪೋದರು ಕೆಲವರು. ಮಚ್ಚೆಯ ಕೊಂಡು ಮೆಟ್ಟದೆ ಕರದಲ್ಲಿ ಪಿಡಿದು ಕನ್ನಡಿಯಂತೆ ನೋಡಿ ಮರುಳಾಗಿ ಸಿಕ್ಕಿ ಪೋದರು ಕೆಲವರು. ಕೊಳ್ಳದೆ ಪಿಡಿಯದೆ ಮಚ್ಚೆಯ ಮೆಟ್ಟಿ ಪೋದರು ಹಲವಕೊಬ್ಬರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.