•  
  •  
  •  
  •  
Index   ವಚನ - 86    Search  
 
ಹಳೆಗಾಲದಲಿ ಒಬ್ಬ ಪುರುಷಂಗೆ, ಎಳೆಯ ಕನ್ನಿಕೆಯ ಮುದುವೆಯ ಮಾಡಲು, ಕೆಳದಿಯರೈವರು ನಿಬ್ಬಣ ಬಂದರು. ಹಸೆಯ ಮೇಲೆ ಮದವಣಿಗನ ತಂದು ನಿಲಿಸಲೊಡನೆ, ಶಶಿವದನೆ ಬಂದು ಕೈಯ ಪಿಡಿದಳು. ಮೇಲುದಾಯದಲ್ಲೊಬ್ಬ ಸತಿ ಕಣ್ಣು ಸನ್ನೆಯ ಮಾಡುತ್ತಿರೆ, ಕೂಡೆ ಬಂದ ನಿಬ್ಬಣಗಿತ್ತಿಯರೆಲ್ಲ ಹೆಂಡತಿಯರಾದರು! ದೂರವಿಲ್ಲದ ಗಮನಕ್ಕೆ ದಾರಿಯ ಪಯಣ ಹಲವಾಯಿತ್ತು. ಸಾರಾಯ ನಿರ್ಣಯವನೇನೆಂಬೆ ಗುಹೇಶ್ವರಾ.
Transliteration Haḷegāladali obba puruṣaṅge, eḷeya kannikeya muduveya māḍalu, keḷadiyaraivaru nibbaṇa bandaru. Haseya mēle madavaṇigana tandu nilisaloḍane, śaśivadane bandu kaiya piḍidaḷu. Mēludāyadallobba sati kaṇṇu sanneya māḍuttire, kūḍe banda nibbaṇagittiyarella heṇḍatiyarādaru! Dūravillada gamanakke dāriya payaṇa halavāyittu. Sārāya nirṇayavanēnembe guhēśvarā.
Hindi Translation प्राचीन पुरुष के साथ नन्हीं बालिका के साथ शादी करें तो पाँच सहेलियाँ बारात में आयीं। सेज पर दूल्हा ले आकर खड़ा करें तो शशिवदना ने आकर हाथ पकड़ा। सुमति स्त्री आँख से इशारा करे तो साथ आयी बाराती स्त्रियाँ पत्नियाँ बन गयीं । बिना दूरी गमन राह का मार्ग कई बन गये। भक्ति तत्व को मैं क्या कहूँ गुहेश्वरा । Translated by: Eswara Sharma M and Govindarao B N
Tamil Translation முன்னொரு காலத்தில் புருஷனிற்கு இளம் கன்னிகையை மணம் செய்வதற்கு ஐந்து தோழிகள் ஊர்வலமாக வந்தனர். மணப்பலகையில் மணமகனை நிறுத்தி வைத்ததும் நிலவு முகத்தினள் வந்து கரம் பற்றினள். நல்லது, தீயதை ஆராய்ந்தறியும் அறிவு எனும் தோழி கண்ணினால் சைகை செய்ததும், உடன் வந்த தோழிகள் அனைவரும் கரம் பற்றினர். அதிக தொலைவு இல்லை. ஆறு படிகளுள்ள பயணமாகும். தத்துவ சொரூபத்தை நான் என்னென்பேன் குஹேசுவரனே? Translated by: Smt. Kalyani Venkataraman, Chennai
ಶಬ್ದಾರ್ಥಗಳು ಕೆಳದಿಯರೈವರು = ಆ ವಧುವಿನ ಸಖಿಯರು; ನಿರ್ಣಯ = ಸ್ವರೂಪ; ಮೇಲುದಾಯದಲೊಬ್ಬ ಸತಿ = ಹಿತಾಹಿತದ ಪರಾಮರ್ಶ ಮಾಡಬಲ್ಲ ಸುಮತಿ.; ಸಾರಾಯ = ತತ್ವ್ತ; ಹಳಗಾಲದ ಒಬ್ಬ ಪುರುಷ = ಅನಾದಿ ಕಾಲದಿಂದಲೂ ಇರುವ ಪರಶಿವ, ಆ ಪರಶಿವನ ಕುರುಹಾದ ಇಷ್ಟಲಿಂಗ.; Written by: Sri Siddeswara Swamiji, Vijayapura