ಮೂರಳಿದು ಮೂರುಳಿದು ಮೂರೊಂದುಗೂಡಿದವರ
ಕೂಡಬೇಕೆಂಬವರಿಗೆ ಪಂಚಾಂಗವ ಬಿಚ್ಚಿ
ಮುಹೂರ್ತವ ಪೇಳಬೇಕು.
ಆರಳಿದು ಆರುಳಿದು ಆರುಗೂಡಿದವರ ಕೂಡಬೇಕೆಂಬವರಿಗೆ
ಪಂಚಾಂಗವ ಬಿಚ್ಚಿ ಮುಹೂರ್ತವ ಪೇಳಬೇಕು.
ಎಂಟಳಿದು ಎಂಟುಳಿದು ಎಂಟುಗೂಡಿದವರ ಕೂಡಿ
ಕಂಟಕವ ಗೆಲೆಯಬೇಕೆಂಬವರಿಗೆ ಪಂಚಾಂಗವ ಬಿಚ್ಚಿ
ಮುಹೂರ್ತವ ಪೇಳಬೇಕು
ನೋಡೆಂದನಯ್ಯಾ ಗೋವಿಂದಭಟ್ಟ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Mūraḷidu mūruḷidu mūrondugūḍidavara
kūḍabēkembavarige pan̄cāṅgava bicci
muhūrtava pēḷabēku.
Āraḷidu āruḷidu ārugūḍidavara kūḍabēkembavarige
pan̄cāṅgava bicci muhūrtava pēḷabēku.
Eṇṭaḷidu eṇṭuḷidu eṇṭugūḍidavara kūḍi
kaṇṭakava geleyabēkembavarige pan̄cāṅgava bicci
muhūrtava pēḷabēku
nōḍendanayyā gōvindabhaṭṭa
kāḍanoḷagāda śaṅkarapriya cannakadambaliṅga
nirmāyaprabhuve.