Index   ವಚನ - 353    Search  
 
ಪಂಚಾಂಗವ ಸುಟ್ಟವರಿಗೆ ಪಂಚಾಂಗವ ಕೊಟ್ಟು ಮುಹೂರ್ತವ ಪೇಳಲಿಬೇಕು. ಪಂಚಾಂಗವ ಪಿಡಿದು ಪಂಚಪದಾರ್ಥವ ಸೇವಿಸುವವರಿಗೆ ಪಂಚಾಂಗವ ಕೊಟ್ಟು ಮುಹೂರ್ತವ ಪೇಳಲಾಗದು. ಪೇಳಿದವರಿಗೆ ಎರಡಳಿಯವು ನೋಡೆಂದನಯ್ಯಾ ಗೋವಿಂದಭಟ್ಟ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.