Index   ವಚನ - 363    Search  
 
ಕೀಲಿಲ್ಲದ ಕತ್ತರಿ, ಹಿನ್ನಿಯಿಲ್ಲದ ಸೂಜಿ, ನೂಲಿಲ್ಲದ ದಾರ. ಕತ್ತರಿಯ ಬ್ರಹ್ಮನುಂಗಿದ, ಸೂಜಿಯ ವಿಷ್ಣುನುಂಗಿದ, ದಾರವ ರುದ್ರನುಂಗಿದ. ಗಜಕಟ್ಟಿಗೆ ಸಿಂಪಿಗೇರ ಸಂಗಣ್ಣ ನುಂಗಿ ಕಾಯಕವ ಮಾಡುತ್ತಿರ್ಪರು ನೋಡೆಂದನಾಚಾರ್ಯನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.