Index   ವಚನ - 368    Search  
 
ಹಸಿಯ ಗೋಡೆಗೆ ಚಿತ್ರವ ಬರೆಯದೆ ಒಣಗೋಡೆಗೆ ಆರುವರ್ಣಗೂಡಿದ ಬಣ್ಣದ ಚಿತ್ರವ ಬರೆಯಲು, ಚಿತ್ರ ಗೋಡೆಯ ನುಂಗಿ, ಗೋಡೆ ಚಿತ್ರವ ನುಂಗಿ, ಚಿತ್ರದ ಮನೆಯವರು ಚಿತ್ರಕನ ಕೊಂದು ಕಾಯಕವ ಮಾಡುತ್ತಿರ್ಪರು. ಇದ ಬಲ್ಲವರು ಕಾಯಕವ ಮಾಡಬೇಕು. ಅರಿಯದವರು ಕಾಯಕ ಬಿಟ್ಟು, ಚಿತ್ರಕರು ಇದ್ದೆಡೆಗೆ ಪೋಗಿ ಚಿತ್ರವ ಬರಿಸಿ ತಿಳಿಯಬೇಕು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.