•  
  •  
  •  
  •  
Index   ವಚನ - 866    Search  
 
ಆಚಾರವಂಗಲೇಪವಾಗಿ, ಕಾಯಮುಕ್ತನು ನೀನು ನೋಡಯ್ಯಾ ಬಸವಣ್ಣಾ. ಅರಿವು ಅಂತರಂಗದಲ್ಲಿ ಭರಿತವಾಗಿಪ್ಪುದಾಗಿ, ಮನೋಮುಕ್ತನು ನೀನು ನೋಡಯ್ಯಾ ಬಸವಣ್ಣಾ. ಅರ್ಪಿತ ಪರಿಣಾಮದಲ್ಲಿ ಅವಿರಳವಾಗಿಪ್ಪುದಾಗಿ ಸರ್ವಾಂಗಲಿಂಗೈಕ್ಯನು ನೀನು ನೋಡಯ್ಯಾ ಬಸವಣ್ಣಾ. ಮುಕ್ತನಲ್ಲೆಂಬ ಬಳಕೆಯ ಮಾತಂತಿರಲಿ, ಬಯಲ ಭ್ರಮೆಯ ಕಳೆದು ಭವದ ಬಟ್ಟೆಯ ಹರಿದಿಪ್ಪುದ ನಮ್ಮ ಗುಹೇಶ್ವರಲಿಂಗ ಬಲ್ಲನು, ನೀನು ಮರೆಯಾಗಿ ನುಡಿವರೆ ಸಂಗನಬಸವಣ್ಣಾ.
Transliteration Ācāravaṅgalēpavāgi, kāyamuktanu nīnu nōḍayyā basavaṇṇā. Arivu antaraṅgadalli bharitavāgippudāgi, manōmuktanu nīnu nōḍayyā basavaṇṇā. Arpita pariṇāmadalli aviraḷavāgippudāgi sarvāṅgaliṅgaikyanu nīnu nōḍayyā basavaṇṇā. Muktanallemba baḷakeya mātantirali, bayala bhrameya kaḷedu bhavada baṭṭeya haridippuda nam'ma guhēśvaraliṅga ballanu, nīnu mareyāgi nuḍivare saṅganabasavaṇṇā.
Hindi Translation आचार अंगलेप होकर, तू कायमुक्त देखो अय्या। ज्ञान अंतरंग में भरे रहने से, तू मनोमुक्त देखोअय्या। अर्पित परिणाम में निर्दोष रहने से तू सर्वांग लिंगैक्य देखो अय्या। मुक्त नहीं जैसे रूढ़ि की बात रहे, शून्य की भ्रम मिठकर भव रास्ता दूर हुए को हमारा गुहेश्वर जानता तू दूर होकर बोलेगा संगनबसवण्णा। Translated by: Eswara Sharma M and Govindarao B N