Index   ವಚನ - 397    Search  
 
ಮದನಂಗದ ಗುಹ್ಯದ ಮುದಿಕೋಡಗದ ಹಾಲು ಭೂಮಿಗೆ ಇಳಿಯಲು, ಭೂಮಿಯ ಒಡೆಯರು ಹಾಲು ಕುಡಿಯದೆ, ಹೇಸಿಕೆಯ ಕುಡಿದು, ನರಕ ತಿಂದು ಬಹುಕಾಲಿರ್ಪರು. ಹೇಸಿಕೆ ನರಕ ನಿಃಕರಿಸಿ ಹಾಲು ಕುಡಿದವರು ಗಡಿಗೆಯನೊಡೆದು ಮನೆಗೆ ಬಾರದೆ ಪೋದರು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.