Index   ವಚನ - 412    Search  
 
ಕೊಂಬಿಲ್ಲದ ಪಶುವಿನ ಮೇಲೆ ನಾಲ್ಕು ಘಟದ ಮಂಕಣಿಯ ಬಿಗಿದು, ಗದ್ದಲದ ಉದಕವ ತುಂಬಿತಾರದೆ, ಗದ್ದಲಿಲ್ಲದ ಉದಕವ ತುಂಬಿತಂದು, ಅರಸು ಮೊದಲಾದ ಪ್ರಜೆಗಳೆಲ್ಲರಿಗೆ ಕುಡಿಸಿ ಕೊಂದು ನಾ ಕುಡಿದು ಸತ್ತು ಬದುಕಿ ಕಾಯಕವ ಮಾಡುತ್ತಿರ್ಪೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.