Index   ವಚನ - 433    Search  
 
ಮಾಳಿಯ ಉಪ್ಪ ಬಡವರು ಉಣ್ಣಲಾಗದು. ಘಟ್ಟದ ಉಪ್ಪ ಧನಿಕರು ಉಣ್ಣಲಾಗದು. ಮಾಳಿಯ ಉಪ್ಪಿಗೆ ಹಣವುಂಟು; ಘಟ್ಟದ ಉಪ್ಪಿಗೆ ಹಣವಿಲ್ಲ. ಹಣವಿಲ್ಲದೆ ಉಪ್ಪ ಕೊಂಡುಂಬುವರು ಬಯಲದೇಶದವರು. ಹಣವುಳ್ಳ ಉಪ್ಪ ಕೊಂಡುಂಬುವರು ಮಲೆಯಾಳದೇಶದವರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.