Index   ವಚನ - 449    Search  
 
ತುಡುಗುವ್ಯಾಪಾರದವರಿಗೆ, ಶೀಲವಂತರಿಗೆ ಕಾಷ್ಠಲೋಹದ ಪಡಿಯಲ್ಲದೆ ಬಣ್ಣದ ಪಡಿಯ ಕೊಡರು. ಅಧಮ, ಅಂಧಕ, ಹೆಳವರಾದ ಹೊಲೆಮಾದಿಗರಿಗೆ ಬಣ್ಣದ ಪಡಿಯ ಕೊಟ್ಟು ಕಾಯಕವ ಮಾಡುತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.