Index   ವಚನ - 463    Search  
 
ಒಬ್ಬನ ಮಾತಕೊಟ್ಟು ಬಾಹ್ಯದಲ್ಲಿಟ್ಟು ಕೊಂದೆ. ಒಬ್ಬನ ಗುಪ್ತಭಾಷೆಯಕೊಟ್ಟು ಅಂತರಂಗದಲ್ಲಿಟ್ಟು ಕೊಂದೆ. ಒಬ್ಬನ ಮೌನಭಾಷೆಯ ಕೊಟ್ಟು ಆಕಾಶದಲ್ಲಿಟ್ಟು ಕೊಂದೆ. ಒಬ್ಬ ಅಧಮನಿಗೆ ತಪ್ಪದೆ ಭಾಷೆಯಕೊಟ್ಟು ಒಳಗಾಗಿ ಹಾದರವನಾಡಿ ಕಾಯಕದಲ್ಲಿರ್ಪೆನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.