•  
  •  
  •  
  •  
Index   ವಚನ - 873    Search  
 
ಆತ್ಮಸಂಗವಾದವರ್ಗೆ ಬಹಿರ್ಭಾವವಿಲ್ಲ. ಇಂದ್ರಿಯಂಗಳು ಲಿಂಗವಾದವರ್ಗೆ ವಿಷಯಸೂತಕವಿಲ್ಲ. ಕರಣಂಗಳು ಲಿಂಗವಾದವರ್ಗೆ ಹಿಂದು ಮುಂದೆಂಬ ಸಂದೇಹವಿಲ್ಲ. ಲಿಂಗಾಲಯವು ಮನವಾದವರ್ಗೆ ಇಹಪರವೆಂಬ ಸಂಶಯವಿಲ್ಲ. ಲೋಕದಂತೆ ನಡೆವರು ಲೋಕದಂತೆ ನುಡಿವರು, ಮನವು ಮಹಾಲಿಂಗದಲ್ಲಿ ಪರಿಣಾಮಿಗಳು! ಅಂತಪ್ಪ ಮಹಾನುಭಾವಿಗಳ ಲೋಕದ ಪ್ರಪಂಚಿಗಳೆಂದಡೆ ಮನೋಮಧ್ಯದಲ್ಲಿಪ್ಪ ಜ್ಯೋತಿರ್ಲಿಂಗವು ನಗದಿಪ್ಪನೆ ಗುಹೇಶ್ವರಾ?
Transliteration Ātmasaṅgavādavarge bahirbhāvavilla. Indriyaṅgaḷu liṅgavādavarge viṣayasūtakavilla. Karaṇaṅgaḷu liṅgavādavarge hindu mundemba sandēhavilla. Liṅgālayavu manavādavarge ihaparavemba sanśayavilla. Lōkadante naḍevaru lōkadante nuḍivaru, manavu mahāliṅgadalli pariṇāmigaḷu! Antappa mahānubhāvigaḷa lōkada prapan̄cigaḷendaḍe manōmadhyadallippa jyōtirliṅgavu nagadippane guhēśvarā?
Hindi Translation आत्मसंगि को बहिर्भाव नहीं। इंद्रिय लिंग बनों को विषय सूतक नहीं। करण लिंग बनों को आगे पीछे जैसा संदेह नहीं। लिंगालय मन बनों को इह-पर जैसा संशय नहीं। लोक जैसे चलते, लोक जैसे बोलते, मन महालिंग में परिणामी हैं। ऐसे महानुभावियों को लोक के प्रपंची कहें तो मनोमध्य में रहा ज्योतिर्लिंग बिना हॅंसे रहेगा गुहेश्वरा? Translated by: Eswara Sharma M and Govindarao B N