Index   ವಚನ - 472    Search  
 
ಎನ್ನ ಕಾಳಿಯ ಧ್ವನಿಕೇಳಿ ಬ್ರಹ್ಮ ಬೆದರಿದ, ವಿಷ್ಣು ಹೆದರಿದ, ರುದ್ರ ಲೆಕ್ಕಮರೆದು ಸುಮ್ಮನಿರ್ದ, ದೇವತೆಗಳು ನೇಮದ ಕಟ್ಟಳೆಯನಳಿದು ಭ್ರಷ್ಟರಾದರು. ಈ ಪರಿಯಲ್ಲಿ ಕಾಯಕವ ಮಾಡುತ್ತಿರ್ಪೆನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.