Index   ವಚನ - 495    Search  
 
ಹೊಲತಿ ಹೊಲೆಯನು ಕೂಡಿ ಕರುಳಿಲ್ಲದ ಮಗನ ಪಡೆದು ಮಗನ ಮದುವೆಯಾಗಿ, ಮಗನ ಕೊಂದು, ತನ್ನ ಕೈಕಾಲು ಕಡಿದು ತಾ ಸತ್ತು ಪೋದಳು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.