Index   ವಚನ - 22    Search  
 
ಬಚ್ಚಲಕುಳಿಯೊಳು ನಿಚ್ಚ ಮುಳುಗಾಡುವಂಗೆ ಉಚ್ಚೆಯಮುಖದೊಳು ಮುಖವಿಟ್ಟು ಮುಸುಡೆಯ ಕಚ್ಚಿ ಕಡಿವ ಹುಚ್ಚು ಹುಳಿತ ನಾಯಿಗೆಲ್ಲಿಯದೊ? ಇಲ್ಲ. ಅಚ್ಚಪ್ರಸಾದ, ನಿಚ್ಚಪ್ರಸಾದ ಆಚಾರ-ವಿಚಾರ ಅನಾಚಾರಿಗೆಲ್ಲಿಯದೊ? ಇಲ್ಲ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.