•  
  •  
  •  
  •  
Index   ವಚನ - 880    Search  
 
ಆದಿ ಅನಾದಿ ಹದಿನಾಲ್ಕುಲೋಕ ಕಾಲ ಕಲ್ಪಿತ ಮಂತ್ರ ತಂತ್ರ ಹೋಮ, ನೇಮ, ಸಂಧ್ಯಾ ಸಮಾಧಿ ಮೌಂಜಿ ಕರ್ಮ ನೀರು ನೇಣು ಯಜ್ಞೋಪವೀತ ಹುಟ್ಟದಂದು ಒಬ್ಬ ಶರಣ ಭಕ್ತಿಯ ಮಾಡುತ್ತಿಪ್ಪುದ ಕಂಡೆನಯ್ಯಾ. ಆ ಶರಣನ ಭಕ್ತಿಯೆಂಬ ಚಿತ್ಪಿಂಡದೊಳಗೆ ಎರಡುಸಾವಿರದೆಂಟುನೂರು ಕೋಟಿ ಯೋಜನದುದ್ದದೊಂದು ಮಹಾಲೋಕದಿಂದತ್ತಲರಿಯದಿಪ್ಪ ಷಡುಸಾದಾಖ್ಯನಾಯಕರ ಹೆಂಡಿರೆಲ್ಲಾ ಓಲೆದೆಗೆದು ಹೋಯಿತ್ತ ಕಂಡೆ ಗುಹೇಶ್ವರಾ.
Transliteration Ādi anādi hadinālkulōka kāla kalpita mantra tantra hōma, nēma, sandhyā samādhi maun̄ji karma nīru nēṇu yajñōpavīta huṭṭadandu obba śaraṇa bhaktiya māḍuttippuda kaṇḍenayyā. Ā śaraṇana bhaktiyemba citpiṇḍadoḷage eraḍusāviradeṇṭunūru kōṭi yōjanaduddadondu mahālōkadindattalariyadippa ṣaḍusādākhyanāyakara heṇḍirellā ōledegedu hōyitta kaṇḍe guhēśvarā.
Hindi Translation आदि अनादि चौदह लोक काल कल्पित मंत्र तंत्र पढ़ना, नेम, संध्या, समाधि, मौंजी कर्म पानी, फाँसी, यज्ञोपवीत पैदा होने के पहले एक शरण भक्ति करता हुआ देखा अय्या। उस शरण की भक्ति जैसे चित्पिंड में दो हजार आठसौ करोड़ योजना लंबा महा लोक से उधर न जाने षड सादाख्य नेताओं की सब पत्नि यों के कर्णाभरण गये हुए थे देखा गुहेश्वरा। Translated by: Eswara Sharma M and Govindarao B N