Index   ವಚನ - 57    Search  
 
ಒರತೆಯಾಯತವೆಂಬ ಮರ್ತ್ಯದ ಶೀಲವಂತರು ನೀವು ಕೇಳಿರೊ. ತನುಕರಗಿ ಮನಕರಗಿ ಕಂಗಳವರತು ಲಿಂಗಕ್ಕೆ ಮಜ್ಜನಕ್ಕೆರದುದೆ ಒರತೆ. ಇಂತಲ್ಲದೆ ಒರತೆ ತೆರದು ಬಂದ ನೀರ ಭಾಂಡಕ್ಕೆ ಭರತಿ ಮಾಡಿ, ಬರುವ ಒರತಿಯೊಳಗೆ ಕಲ್ಲು ಮುಳ್ಳು ಹಾಕಿ ಮುಚ್ಚುವ ನರಕಿ ನಾಯಿಗಳಿಗೆ ಶೀಲವೆಲ್ಲಿಯದೊ? ಇಲ್ಲ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.