ಉಪ್ಪು ಹುಳಿಯನು ಬಿಟ್ಟು
ಸಪ್ಪೆ ಆಯತವೆಂಬ ಹಿಪ್ಪೆಗಳ್ಳರು ನೀವು ಕೇಳಿರೊ.
ಉಪ್ಪಲ್ಲವೆ ನಿಮ್ಮುದರದಾಸೆ?
ಹುಳಿಯಲ್ಲವೆ ನಿಮ್ಮುದರದಾಸೆ?
ತುಪ್ಪವಲ್ಲವೆ ನಿಮ್ಮ ತುದಿನಾಲಿಗೆಯ ಸವಿಯು?
ಇಂತಪ್ಪ ಉಪ್ಪು ಹುಳಿಯನು ಬಿಟ್ಟು
ತಪ್ಪದು ಸಪ್ಪೆಯ ಶೀಲ.
ನೀವಿಪ್ಪುದು ಗುರುಪಾದದಲ್ಲಿ
ಸರ್ಪಭೂಷಣ ನಿಮಗೊಲಿವ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.