Index   ವಚನ - 62    Search  
 
ಧೂಳಿಪಾವುಡ, ಸರ್ವಾಂಗಪಾವುಡ, ಸಮಯಾಚಾರ, ಸಹಭೋಜನವೆಂಬ ಶೀಲವಂತರು ನೀವು ಕೇಳಿರೊ. ಗಾಳಿಗೂಳಿತನವ ಬಿಟ್ಟುದೆ ಧೂಳಿಪಾವುಡ. ಸರ್ವ ಗರ್ವವನಳಿದು ನಿಗರ್ವವಾದುದೆ ಸರ್ವಾಂಗಪಾವುಡ. ಸಮತೆ ಸೈರಣೆ ಉಳ್ಳುದೆ ಸಮಯಾಚಾರ. ಶರಣಸತಿ ಲಿಂಗಪತಿಯಾದುದೆ ಸಹಭೋಜನ. ಇಂತಲ್ಲದೆ ಸಂತೆಯ ಸೂಳೆಯಂತೆ ಬಂದವರ ಸಂತವಿಟ್ಟು ತಾವು ಮುನ್ನಿನಂತೆ ಇರುವ ಭ್ರಾಂತು ಭ್ರಮಿತ ವ್ರತಿ ಗಿತಿಗಳಿಗೆ ಶೀಲವೆಲ್ಲಿಯದೊ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.