ತನಗೆ ಹುಟ್ಟಿದ ಮಕ್ಕಳಿಗೆ ತನ್ನ ಗುರುವ ಬಿಟ್ಟು
ತನ್ನ ಮಕ್ಕಳಿಗೆ ತಾನಟ್ಟಣೆಯ ಗುರುವಾಗಿ
ಲಿಂಗವ ಕಟ್ಟುವ ಆ ಕುಲಗೆಟ್ಟ ಹೊಲೆಯರ
ಮುಖವ ನೋಡಲಾಗದು.
ಅದೇನು ಕಾರಣವೆಂದರೆ ಅವರಿಗೆ
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವಿಲ್ಲ.
ಅವರಿಗೆ ಪಾದೋದಕ ಪ್ರಸಾದವಿಲ್ಲ.
ಅವ ಪರವಾದಿ ; ಅವ ಪಂಚಮಹಾಪಾತಕಿ ಪಾಷಂಡಿ.
ಅವನ ಮುಖವ ನೋಡಲಾಗದು.
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.