ಒಂದೂರೊಳಗೆ ಗುರುವಿದ್ದು ವಂದಿಸಿ
ಬಿನ್ನಹ ಬಿಡುಗಡೆಯ ಮಾಡಿಕೊಳ್ಳದೆ
ಒಡಲ ಹೊರವ ಮಾನವರು ಮುಂದೆ
ಹಂದಿಯ ಜಲ್ಮದಲ್ಲಿ ಅನೇಕಕಾಲ ಬಪ್ಪುದು ತಪ್ಪದು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Art
Manuscript
Music
Courtesy:
Transliteration
Ondūroḷage guruviddu vandisi
binnaha biḍugaḍeya māḍikoḷḷade
oḍala horava mānavaru munde
handiya jalmadalli anēkakāla bappudu tappadu kāṇā
akhaṇḍa paripūrṇa ghanaliṅgaguru
cennabasavēśvara śivasākṣiyāgi.