ಗುರುಹಿರಿಯರ ಪಾದಸೇವೆಯ
ನೆರೆ ಮಾಡುವ ಪರಿಯ ಕೇಳಿರೊ ಭಕ್ತರು.
ಮಾಡಿ ನೀಡುವಲ್ಲಿ ಸೊರಗಿ ಸೊಕ್ಕಿ
ಕೆಕ್ಕಸಗೆಲವುತ್ತ ಮಾಡಲಾಗದು.
ಸಲೆ ಪಂಕ್ತಿಯಲ್ಲಿ ಸಂಚು ವಂಚನೆ
ಸನ್ನೆ ಸಟೆ ಮೈಸಂಜ್ಞೆಯಲುಂಬುದ ಬಿಟ್ಟು
ಪನ್ನಗಧರನ ಶರಣರಿಗೆ ಬಿನ್ನಹವಮಾಡಿ
ಬಿಜಯಂಗೆಯಿಸಿ ತಂದು
ಪರಮಾನ್ನ ಪರಿಮಳದಗ್ಘಣಿಯ ನೀಡುವ ಭಕ್ತರಿಗೆ
ಮುಕ್ತಿ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Art
Manuscript
Music
Courtesy:
Transliteration
Guruhiriyara pādasēveya
nere māḍuva pariya kēḷiro bhaktaru.
Māḍi nīḍuvalli soragi sokki
kekkasagelavutta māḍalāgadu.
Sale paṅktiyalli san̄cu van̄cane
sanne saṭe maisan̄jñeyalumbuda biṭṭu
pannagadharana śaraṇarige binnahavamāḍi
bijayaṅgeyisi tandu
paramānna parimaḷadagghaṇiya nīḍuva bhaktarige
mukti kāṇā
akhaṇḍa paripūrṇa ghanaliṅgaguru
cennabasavēśvara śivasākṣiyāgi.