ಅಯ್ಯಾ, ಜೀವಾತ್ಮ ಭೇದವಾದಮಂ ಪೇಳ್ವೆನಯ್ಯಾ:
ಜೀವ ಬೇರೆ, ಆತ್ಮ ಬೇರೆ ಎಂದು ಹೇಳುವ[ವು] ಹಲವು ಶಾಸ್ತ್ರ;
ಜೀವಾತ್ಮ ಐಕ್ಯ ಹೇ[ಳುವವು] ಹಲವು ಶಾಸ್ತ್ರ.
ಅ[ದು] ಎಂತೆಂದಡೆ:
ಸರ್ವ ಚೇತನದಲ್ಲಿಯು ಉಂಟು ಎಂದು ಹೇಳುವವು ಜೀವವು,
ಶಿವಶಾಸ್ತ್ರ ಇದಕ್ಕೆ ಸಾಕ್ಷಿ:
"ಅಣೋರಣೀಯಾ[ನ್] ಮಹತೋ ಮಹೀಯಾ[ನ್]"
ಎಂದು ಶ್ರುತಿಯುಂಟಾಗಿ, ಇದಂ ತಿಳಿದು, ಭೇದವಾದಿಗಳು
ಸರ್ವಜೀವರಲ್ಲಿಯು ಆತ್ಮವುಂಟಾದಡೆಯು
ಪಶುಜೀವಜಂತುಗಳಿಗೆ ನಮಸ್ಕಾರವ ಮಾಡಬಾರದೆ ? ಎಂದು
ಹೇಳುವ ಮಾಯಾವಾದಿಗಳು ನೀವು ಕೇಳಿ;
ಅದು ಎಂತೆಂದಡೆ:
ಎಲಾ ಎಲಾ, ಉಚ್ಫಿಷ್ಟದಲ್ಲಿಯು
ಅರ್ಕನ ಪ್ರಭೆ ಬಿದ್ದು ರಸ ಬತ್ತುವದು.
ಅದರ ರಸಾಸ್ವಾದವು ಅರ್ಕಂಗೆ ಮುಟ್ಟುವುದೆ?
ಎಲಾ ಎಲಾ, ಸಿಲಹದಲ್ಲಿಯು ಸೂರ್ಯಪ್ರಭೆಯುಂಟು.
ಅಲ್ಲಿ ವಹ್ನಿಯು ಪುಟ್ಟುವುದೆ?
ಇದರಂತೆ, ಸರ್ವ ಜೀವಜಂತುಗಳಲ್ಲಿ
ಮಾಯಾವಾದಿಗಳಲ್ಲಿ
ಆತ್ಮಪರೀಕ್ಷೆಯಿಲ್ಲದವರಲ್ಲಿ
[ದು]ಷ್ಟ ದುರ್ಜನರಲ್ಲಿ
ಶಿವಭಕ್ತರಾಗಿ ಲಿಂಗವ ಧರಿಸಿ
ದೇವರಾದರು ಸರಿಯೆ,
[ಬ್ರಾ]ಹ್ಮರಾಗಿ ಯಜ್ಞೋಪವೀತವ
ಹಾಕಿಕೊಂಡಿದ್ದರು ಸರಿಯೆ,
ಯತಿಗಳಾಗಿ ಮಂಡೆ ಬೋಳಿಸಿಕೊಂಡಿದ್ದರು ಸರಿಯೆ,
ಮಾರ್ಗ ತಪ್ಪಿ ನಡೆವ ಜೀವಜಂತುಗಳಲ್ಲಿ
ಸಿಲಹ ಉಚ್ಫಿಷ್ಟದ ಮೇಲೆ ಸೂರ್ಯನ ಪ್ರಭೆ ಬಿದ್ದಂತೆ
ಆತ್ಮ ಇದ್ದ ಕಾರಣ ಇವರಿಗೆ ಕೈಮುಗಿಯಲಾಗದು ಕಾಣಿರಯ್ಯಾ!
ಇ[ವ]ರೊಳಗೆ ಶಿವಯೋಗಿಗಳು ದಾರೆಂದು ಕೇಳುವ
ಮಾಯಾವಾದಿ ಕೇಳಲಾ.
ಅದು ಎಂತೆಂದಡೆ:
ಸೂರ್ಯನ ಪ್ರಕಾಶಕ್ಕೆ ಬಿಲದ್ವಾರವ ಸಿಲಹಂ ಪಿಡಿಯೆ
ಅರ್ಕನ ಪ್ರಕಾಶಕ್ಕೆ ವಹ್ನಿ ಪುಟ್ಟೆ
ಸರ್ವಕಾಷ್ಠವನು ಸುಡುವದು ಕಾಣೆಲಾ.
ಶಿವಾತ್ಮ ಐಕ್ಯವ ಮಾಡಿದಾ ಶಿವಯೋಗಿಗಳಲ್ಲಿ
ಸರ್ವಕರ್ಮೇಂದ್ರಿಯ ಈ ತೆರದಲ್ಲಿ ಸುಟ್ಟ ಕಾರಣ
ನಿರ್ಮಳಕಾಯರಾದರು.
ಇಂತಪ್ಪ ಜೀವಾತ್ಮವ ಐಕ್ಯವ ಮಾಡಿದ ಶಿವಯೋಗಿಗಳಲ್ಲಿ
ನಮಸ್ಕರಿಸಬಹುದು.
ಇಂತಾ ಜೀವಾತ್ಮ ವೇದವ ತಿಳಿಯದೆ
'ನಾ ಬ್ರಾಹ್ಮಣ' 'ನಾ ಶಿವಭಕ್ತ'ನೆಂದು
ಹೇಳಿಕೊಂಡು ತಿರುಗುವ
ಮೂಳ ಹೊಲೆಯರ ಮುಖವ
ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ
Art
Manuscript
Music
Courtesy:
Transliteration
Ayyā, jīvātma bhēdavādamaṁ pēḷvenayyā:
Jīva bēre, ātma bēre endu hēḷuva[vu] halavu śāstra;
jīvātma aikya hē[ḷuvavu] halavu śāstra.
A[du] entendaḍe:
Sarva cētanadalliyu uṇṭu endu hēḷuvavu jīvavu,
śivaśāstra idakke sākṣi:
Aṇōraṇīyā[n] mahatō mahīyā[n]
endu śrutiyuṇṭāgi, idaṁ tiḷidu, bhēdavādigaḷu
sarvajīvaralliyu ātmavuṇṭādaḍeyu
paśujīvajantugaḷige namaskārava māḍabārade? Endu
hēḷuva māyāvādigaḷu nīvu kēḷi;
adu entendaḍe:
Elā elā, ucphiṣṭadalliyu
arkana prabhe biddu rasa battuvadu.
Adara rasāsvādavu arkaṅge muṭṭuvude?Elā elā, silahadalliyu sūryaprabheyuṇṭu.
Alli vahniyu puṭṭuvude?
Idarante, sarva jīvajantugaḷalli
māyāvādigaḷalli
ātmaparīkṣeyilladavaralli
[du]ṣṭa durjanaralli
śivabhaktarāgi liṅgava dharisi
dēvarādaru sariye,
[brā]hmarāgi yajñōpavītava
hākikoṇḍiddaru sariye,
yatigaḷāgi maṇḍe bōḷisikoṇḍiddaru sariye,
mārga tappi naḍeva jīvajantugaḷalli
silaha ucphiṣṭada mēle sūryana prabhe biddante
ātma idda kāraṇa ivarige kaimugiyalāgadu kāṇirayyā!
I[va]roḷage śivayōgigaḷu dārendu kēḷuva
māyāvādi kēḷalā.
Adu entendaḍe:
Sūryana prakāśakke biladvārava silahaṁ piḍiye
arkana prakāśakke vahni puṭṭe
sarvakāṣṭhavanu suḍuvadu kāṇelā.
Śivātma aikyava māḍidā śivayōgigaḷalli
sarvakarmēndriya ī teradalli suṭṭa kāraṇa
nirmaḷakāyarādaru.
Intappa jīvātmava aikyava māḍida śivayōgigaḷalli
namaskarisabahudu.
Intā jīvātma vēdava tiḷiyade
'nā brāhmaṇa' 'nā śivabhakta'nendu
hēḷikoṇḍu tiruguva
mūḷa holeyara mukhava
nōḍalāgadu kāṇō
kūḍalādi cannasaṅgamadēvā