ಶ್ರೀಗುರುಲಿಂಗಜಂಗಮದ ದೀಕ್ಷಾಭಸಿತವ ನಂಬುಗೆಯಿಂದ
ಅಷ್ಟೈಶ್ವರ್ಯವಿದೆಂದು ಶ್ರೀಗುರುಸ್ಮರಣೆಯಿಂದ
ಲಲಾಟದಲ್ಲಿ ಧರಿಸಿದಾಕ್ಷಣವೆ
ಬ್ರಹ್ಮನ ಆಜ್ಞೆಯಿಂದ ವಿಧಿಬರೆದ ಲಿಖಿತವ ತೊಡದು
ಶಿವಲಿಖಿತವ ಲಿಖಿಸುವುದಯ್ಯ,
ಶ್ರೀಗುರುಲಿಂಗಜಂಗಮದ ದೀಕ್ಷಾಭಸಿತವ
ಗುರುತ್ವವಕೊಟ್ಟು ಲಿಂಗನಿಷ್ಠಾಪರಭಕ್ತಿಯ ತೊರುವುದಯ್ಯ,
ಶ್ರೀಗುರುಲಿಂಗಜಂಗಮದ ದೀಕ್ಷಾ-ಶಿಕ್ಷಾ-ಜ್ಞಾನಭಸಿತವ
ಸರ್ವಾಂಗದಲ್ಲಿ ಸ್ನಾನಧೂಳನವ ಮಾಡಿ
ನಾಲ್ವತ್ತೆಂಟು ತತ್ವಸ್ಥಾನಂಗಳಲ್ಲಿ ಮಂತ್ರಸ್ಮರಣೆಯಿಂದ ಧರಿಸಿದ
ಲಿಂಗಶರಣರಿಗೆ ಸರ್ವಾಚಾರಸಂಪತ್ತಿನ
ಜಂಗಮಾನುಭಾವವ ತೋರುವುದಯ್ಯ.
ಸಕಲಕ್ರಿಯೆಗಳಿಗೆ ಈ ಕ್ರಿಯಾಚಿದ್ಭಸಿತವೆ ಶುಭತಿಲಕವಯ್ಯ,
ಇಂಥ ಶ್ರೀಗುರುಲಿಂಗಜಂಗಮದ ಪಾದೋದಕ ಪ್ರಸಾದ
ಕ್ರಿಯಾ ಚಿದ್ಭಸಿತಕಿಂದ ಪರವಸ್ತುವಿಲ್ಲ ನೋಡ.
ಶ್ರೀಗುರುಲಿಂಗಜಂಗಮದ ಚಿತ್ಪ್ರಕಾಶ ಚಿದ್ಭಸಿತವೆ
ಪರಾತ್ಪರವಸ್ತು ನೋಡಾ, ಸಂಗನಬಸವೇಶ್ವರ.
Art
Manuscript
Music
Courtesy:
Transliteration
Śrīguruliṅgajaṅgamada dīkṣābhasitava nambugeyinda
aṣṭaiśvaryavidendu śrīgurusmaraṇeyinda
lalāṭadalli dharisidākṣaṇave
brahmana ājñeyinda vidhibareda likhitava toḍadu
śivalikhitava likhisuvudayya,
śrīguruliṅgajaṅgamada dīkṣābhasitava
gurutvavakoṭṭu liṅganiṣṭhāparabhaktiya toruvudayya,
śrīguruliṅgajaṅgamada dīkṣā-śikṣā-jñānabhasitava
sarvāṅgadalli snānadhūḷanava māḍi
nālvatteṇṭu tatvasthānaṅgaḷalli mantrasmaraṇeyinda dharisida
liṅgaśaraṇarige sarvācārasampattina
Jaṅgamānubhāvava tōruvudayya.
Sakalakriyegaḷige ī kriyācidbhasitave śubhatilakavayya,
intha śrīguruliṅgajaṅgamada pādōdaka prasāda
kriyā cidbhasitakinda paravastuvilla nōḍa.
Śrīguruliṅgajaṅgamada citprakāśa cidbhasitave
parātparavastu nōḍā, saṅganabasavēśvara.