Index   ವಚನ - 26    Search  
 
ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಮರ್ತ್ಯಲೋಕ ಮೊದಲಾಗಿ ಆವ ಲೋಕದಲ್ಲಿ ಹೋದರು ಸಮಸ್ತಲಿಂಗಭೋಗ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಸಮಸ್ತಲೋಕದಲ್ಲಿ ಸತ್ಯ ಸಾತ್ವಿಕ ಪರೋಪಕಾರ ಸುಗುಣ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಪರಮವಿರಕ್ತಿ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಸಾರಸದ್ಭಕ್ತಿ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಶಮೆ ದಮೆ ಶಾಂತಿ ಸೈರಣೆ ಸತ್ಕ್ರಿಯಾ ಸಮ್ಯಜ್ಞಾನ ಸದಾಚಾರ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ನಿಜಶಿವಯೋಗ ದೊರವುದು ನೋಡ. ಶ್ರೀ ಮಹಾಮಂತ್ರವೆ ಸಕಲಕಾರಣಕ್ಕೆ ಮೂಲಚೈತನ್ಯ ನೋಡ ಸಂಗನಬಸವೇಶ್ವರ