ಹರಹರ ಶಿವಶಿವ ಜಯಜಯ ಕರುಣಾಕರ
'ಮತ್ಪ್ರಾಣನಾಥ ಮಹಾಪ್ರಭು ಚಿದ್ಘನ ಶ್ರೀಗುರುಲಿಂಗಜಂಗಮವೆ,
ನಿಮ್ಮ ಶರಣಗಣಂಗಳೆಲ್ಲ
ನಿರವಯಸಮಾಧಿಯಲ್ಲಿ ಹೋದ ಮಾರ್ಗವ
ನಿಮ್ಮ ಕರುಣಕಟಾಕ್ಷೆಯಿಂದ ದಯವಿಟ್ಟು ರಕ್ಷಿಸಯ್ಯ ತಂದೆ,
ಕೇಳಯ್ಯ ವರಕುಮಾರದೇಶಿಕೇಂದ್ರನೆ
ಶಿವಗಣಂಗಳೆಲ್ಲ ಪರಶಿವಲಿಂಗಕ್ಕು ತಮಗು ಭಿನ್ನವಿಲ್ಲದೆ
ಅಭಿನ್ನಸ್ವರೂಪದಿಂದ ಎರಡಳಿದು ಏಕರಸವಾಗಿ
ಪುಷ್ಪ ಪರಿಮಳದಂತೆ, ಬಾವನ್ನಕೋಶ ಬಂಗಾರದ ತೆರದಿ,
ಪಂಚಾಗ್ನಿಗಳ ಮೂಲ ಚಿತ್ಸ್ವರೂಪವಾದ
ಚಿದಗ್ನಿಯಲ್ಲಿ ಸಮರಸವ ಮಾಡಿ,
ಸರ್ವಾಚಾರಸತ್ಕಾಯಕ ಸತ್ಕ್ರಿಯಾ ಸಮ್ಯಜ್ಞಾನ ಸದ್ಭಕ್ತಿಯೆ
ದ್ವಿತೀಯ ಕೈಲಾಸವೆಂದು,
ಸತ್ಯ ನಡೆನುಡಿಯೆ ನಿಜಶಿವಮಂದಿರವೆಂದು,
ತನ್ನ ದೀಕ್ಷಾಕರ್ತುವಾದ ಗುರು ಮೊದಲಾಗಿ ಸಮಸ್ತರೆಲ್ಲ
ಶಿವಪಥಕ್ಕೆ ಯೋಗ್ಯವಾಗಿ ಬಂದಡೆ ಒಡಗೂಡಿ ಕೊಂಡು,
ಶಿವಪಥಕ್ಕೆ ಅಯೋಗ್ಯವಾದಡೆ ತ್ಯಜಿಸಿ,
ಪರಿಪೂರ್ಣ ಪರಂಜ್ಯೋತಿ ಸ್ತಂಭಾಕಾರವೆಂಬ
ನಿಷ್ಕಲ ಪರಶಿವಬಿಂದುಸ್ವರೂಪವಾದ
ಷೋಡಶವರ್ಣದ ಚಿದ್ಬೆಳಗಿನೊಳಗೆ ಉರಿ-ಕರ್ಪೂರಂದತೆ
ನಿಜಶಿವಸಮಾಧಿಯಲ್ಲಿ ಬೆರೆದು ಹೋದರು ನೋಡ.
ಇಂತೀ ಪ್ರಕಾರದಿಂದ ರಾಜಹಂಸನೋಪಾಯದಿಯಲ್ಲಿ
ಒಳಗು ಹೊರಗು ಅನಾಚಾರವ ತ್ಯಜಿಸಿ,
ಶಿವಾಚಾರಸಮರತಿಯಿಂದ ಕೂಡಿದರು ನೋಡ.
ಆಚಾರವೆಪ್ರಾಣವಾಗಿ ಸಕಲಪ್ರಮಥಗಣವೆಲ್ಲ
ಚಿದ್ಘನಮಹಾಲಿಂಗದಲ್ಲಿ ಕೂಟಸ್ಥರಾದರು ನೋಡ
ಸಂಗನಬಸವೇಶ್ವರ
Art
Manuscript
Music
Courtesy:
Transliteration
Harahara śivaśiva jayajaya karuṇākara
'matprāṇanātha mahāprabhu cidghana śrīguruliṅgajaṅgamave,
nim'ma śaraṇagaṇaṅgaḷella
niravayasamādhiyalli hōda mārgava
nim'ma karuṇakaṭākṣeyinda dayaviṭṭu rakṣisayya tande,
kēḷayya varakumāradēśikēndrane
śivagaṇaṅgaḷella paraśivaliṅgakku tamagu bhinnavillade
abhinnasvarūpadinda eraḍaḷidu ēkarasavāgi
puṣpa parimaḷadante, bāvannakōśa baṅgārada teradi,
pan̄cāgnigaḷa mūla citsvarūpavāda
cidagniyalli samarasava māḍi,
sarvācārasatkāyaka satkriyā samyajñāna sadbhaktiye
dvitīya kailāsavendu,
Satya naḍenuḍiye nijaśivamandiravendu,
tanna dīkṣākartuvāda guru modalāgi samastarella
śivapathakke yōgyavāgi bandaḍe oḍagūḍi koṇḍu,
śivapathakke ayōgyavādaḍe tyajisi,
paripūrṇa paran̄jyōti stambhākāravemba
niṣkala paraśivabindusvarūpavāda
ṣōḍaśavarṇada cidbeḷaginoḷage uri-karpūrandate
nijaśivasamādhiyalli beredu hōdaru nōḍa.
Intī prakāradinda rājahansanōpāyadiyalli
oḷagu horagu anācārava tyajisi,
śivācārasamaratiyinda kūḍidaru nōḍa.
Ācāraveprāṇavāgi sakalapramathagaṇavella
cidghanamahāliṅgadalli kūṭastharādaru nōḍa
saṅganabasavēśvara