Index   ವಚನ - 32    Search  
 
ಆಚಾರ-ಅರುಹಿನಲ್ಲಿ ಸತ್ಕ್ರಿಯಾಸುಜ್ಞಾನ ಗುರುವ ಸಂಬಂಧವ ಮಾಡಿಕೊಂಡು, ಪಾಣಿ-ಪ್ರಾಣದಲ್ಲಿ ಸತ್ಕ್ರಿಯಾಸುಜ್ಞಾನಲಿಂಗವ ಸಂಬಂಧವ ಮಾಡಿಕೊಂಡು, ಆಚರಣೆ-ಸಂಬಂಧಂಗಳಲ್ಲಿ ಸತ್ಕ್ರಿಯಾ ಸುಜ್ಞಾನಜಂಗಮವ ಸಂಬಂಧವ ಮಾಡಿಕೊಂಡು, ನಡೆ-ನುಡಿಗಳಲ್ಲಿ ಸತ್ಕ್ರಿಯಾ ಸುಜ್ಞಾನ ಪಾದೋದಕವ ಸಂಬಂಧವ ಮಾಡಿಕೊಂಡು, ಜಿಹ್ವೆ-ನಾಸಿಕಂಗಳಲ್ಲಿ ಸತ್ಕ್ರಿಯಾ ಸುಜ್ಞಾನ ಪ್ರಸಾದವ ಸಂಬಂಧವ ಮಾಡಿಕೊಂಡು, ಸರ್ವಾಂಗ-ಸುಮನದಲ್ಲಿ ಸತ್ಕ್ರಿಯಾಸುಜ್ಞಾನ ಚಿದ್ವಿಭೂತಿಯ ಸಂಬಂಧವ ಮಾಡಿಕೊಂಡು, ತತ್ಸ್ಥಾನ-ಚಿದೃಕ್ಕಿನಲ್ಲಿ ಸತ್ಕ್ರಿಯಾ ಸುಜ್ಞಾನ ಚಿದ್ರುದ್ರಾಕ್ಷಿಯ ಸಂಬಂಧವ ಮಾಡಿಕೊಂಡು, ಕ್ರಿಯಾಕಾಶ-ಜ್ಞಾನಾಕಾಶಂಗಳಲ್ಲಿ ಸತ್ಕ್ರಿಯಾ ಸುಜ್ಞಾನ ಚಿನ್ಮಂತ್ರವ ಸಂಬಂಧವ ಮಾಡಿಕೊಂಡರು ನೋಡ- ಸೂಕ್ಷ್ಮ ಕಂಥೆಯ ಧರಿಸಿ, ಸಚ್ಚಿದಾನಂದ ಲೀಲಾಮೂರ್ತಿಗಳಾಗಿ ಇಂತು ಉಭಯ ವಿಚಾರವಿಡಿದು ಆಚರಿಸುವರೆ ಆದಿಸದ್ಭಕ್ತ ಶಿವಶರಣಗಣಂಗಳು ನೋಡ ಸಂಗನಬಸವೇಶ್ವರ.