Index   ವಚನ - 56    Search  
 
ಅಯ್ಯ, ನಿನ್ನ ಸ್ವಾತ್ಮಜ್ಞಾನದಿಂದ ಶ್ರುತಿಗುರುಸ್ವಾನುಭಾವವಿಡಿದು, ನಿನ್ನ ತನು-ಮನ-ಕರಣ-ಇಂದ್ರಿಯಂಗಳ ಪರಿಪಕ್ವವ ಮಾಡಿ, ಆ ತನು-ಮನ-ಕರಣ-ಇಂದ್ರಿಯಂಗಳ ಆಶ್ರೈಸಿದ ಅರ್ಥಪ್ರಾಣಾಭಿಮಾನಂಗಳ ಶ್ರೀಗುರುಲಿಂಗಜಂಗಮ ಭಕ್ತಮಾಹೇಶ್ವರ ಶರಣಗಣಂಗಳಿಗರ್ಪಿತವಮಾಡಿ, ನಿರ್ವಂಚಕಬುದ್ಧಿ ಮುಂದುಗೊಂಡು, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಿಂದ ಇಷ್ಟಲಿಂಗವ ತೃಪ್ತಿಮಾಡಿ, ಮಂತ್ರ ಧ್ಯಾನ ಜಪಸ್ತೋತ್ರಂಗಳಿಂದ ಪ್ರಾಣಲಿಂಗವ ತೃಪ್ತಿಮಾಡಿ, ಮನೋರ್ಲಯ ನಿರಂಜನ ಪೂಜಾಕ್ರಿಯೆಗಳಿಂದ ಭಾವಲಿಂಗವ ತೃಪ್ತಿಮಾಡಿ, ಗುರುಲಿಂಗಜಂಗಮದ ಪಾದೋದಕ ಪ್ರಸಾದದಿಂದ ಮತ್ತಾ ಗುರುಲಿಂಗಜಂಗಮದ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಮೊದಲಾದ ಮಹಾಪ್ರಮಥಗಣಂಗಳ ತೃಪ್ತಿಮಾಡಿ, ತನಗೊಂದಾಶ್ರಯಂಗಳಿಲ್ಲದೆ, ಚಿದ್ಘನಲಿಂಗದಲ್ಲಿ ಅವಿರಾಳನಂದದಿಂದ ಕೂಟಸ್ಥನಾಗಿರುವಂದೆ ನಿಸ್ಸಂಸಾರದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಷ್ಪ್ರಪಂಚ ನಿರಾಲಂಬ ನಿಷ್ಕಾಮ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.