ಅಯ್ಯ, ಬಸವ ಮೊದಲಾದ ಪ್ರಮಥಗಣಾರಾಧ್ಯರ
ಸನ್ಮಾರ್ಗಾಚಾರಕ್ಕೆ ದೃಢಚಿತ್ತದಿಂದ ನಿಂದು,
ನಿರಾಭಾರಿವೀರಶೈವ ಷಟ್ಸ್ಥಲಮಾರ್ಗದಲ್ಲಿ ಆಚರಿಸುವ
ಶರಣಗಣಂಗಳಲ್ಲಿ ಪಂಚಸೂತಕಂಗಳ ಕಲ್ಪಿಸದೆ,
ಭೃತ್ಯಾಚಾರ ಮುಂದುಗೊಂಡು,
ಅವರೊಕ್ಕುಮಿಕ್ಕುದ ಹಾರೈಸಿ,
ನಿಜಭಕ್ತಿಯಲ್ಲಿ ನಿಂದು, ದೃಢಚಿತ್ತನಾಗಿ,
ಸನ್ಮಾರ್ಗಾಚಾರಕ್ಕೆ ಬಾರದಂಥ ಗುರು-ಚರ-ಪರ-ಭಕ್ತ-ಗಣ
ಬಂಧು-ಬಳಗ, ತಂದೆ-ತಾಯಿ,
ಪುತ್ರ, ಮಿತ್ರ, ಕಳತ್ರ, ಶಿಷ್ಯ ಮೊದಲಾಗಿ,
ತೃಣಕ್ಕೆ ಸಮಮಾಡಿ ತ್ಯಜಿಸಿ, ಮನದ ಮಧ್ಯದಲ್ಲಿ ಹುಟ್ಟಿದ
ಕಾಮ, ಕ್ರೋಧ, [ಲೋಭ] ಮೋಹ,
ಮದ, ಮತ್ಸರಂಗಳ ಬಲೆಗೆ ಸಿಲ್ಕದೆ,
ತ್ರಿಕರಣದ ಪವಿತ್ರತೆಯಿಂದ ಅಷ್ಟಾವರಣದ ಸ್ತೋತ್ರವ
ಮಾಡುವಂಥಾದೆ ಸಮಯದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ನಿರಾಲಂಬ
ಚೆನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ
ನಿರೂಪಮಂ ಕೊಡುತಿರ್ದರು
ನೋಡ ಸಂಗನಬಸವೇಶ್ವರ.
Art
Manuscript
Music
Courtesy:
Transliteration
Ayya, basava modalāda pramathagaṇārādhyara
sanmārgācārakke dr̥ḍhacittadinda nindu,
nirābhārivīraśaiva ṣaṭsthalamārgadalli ācarisuva
śaraṇagaṇaṅgaḷalli pan̄casūtakaṅgaḷa kalpisade,
bhr̥tyācāra mundugoṇḍu,
avarokkumikkuda hāraisi,
nijabhaktiyalli nindu, dr̥ḍhacittanāgi,
sanmārgācārakke bāradantha guru-cara-para-bhakta-gaṇa
bandhu-baḷaga, tande-tāyi,
putra, mitra, kaḷatra, śiṣya modalāgi,
tr̥ṇakke samamāḍi tyajisi, manada madhyadalli huṭṭida
kāma, krōdha, [lōbha] mōha,
mada, matsaraṅgaḷa balege silkade,
trikaraṇada pavitrateyinda aṣṭāvaraṇada stōtrava
Māḍuvanthāde samayadīkṣe.
Intuṭendu śrīguru niṣkaḷaṅka nirālamba
cennabasavarājēndranu
nirlajjaśāntaliṅgadēśikōttamaṅge
nirūpamaṁ koḍutirdaru
nōḍa saṅganabasavēśvara.