ವಚನ - 90     
 
ಆಚಾರವರಿಯದೆ, ಕ್ರಿಯಾಚಾರ ಉಡುಗದೆ, ವಿಭವವಳಿಯದೆ, ಕೋಪವಡಗದೆ, ತಾಪ ಮುರಿಯದೆ, ಬರಿದೆ ಭಕ್ತರಾದೆವೆಂದು ಬಿಬ್ಬನೆ ಬಿರಿಯುವ ಕೇಡಿಂಗೆ ನಾನು ಬೆರಗಾದೆ ಕಾಣಾ ಗುಹೇಶ್ವರಾ.