Index   ವಚನ - 84    Search  
 
ಅಯ್ಯ, ನಾದ ನಾಳಂಗಳು ಬಲಿದು ಪರಿಪೂರ್ಣ ಚಿಜ್ಜ್ಯೋತಿರ್ಲಿಂಗಧ್ಯಾನದಲ್ಲಿ ನಿಂದು ನಿಜಹೃದಯ ಚಿದ್ಭಾವದೃಕ್ಕಿನಿಂದ ನವಲಿಂಗಂಗಳ ನಿರೀಕ್ಷಿಸಿ, ಸುಚಿತ್ತ-ಸುಬುದ್ಧಿ-ನಿರಹಂಕಾರ-ಸುಮನ-ಸುಜ್ಞಾನ-ಸದ್ಭಾವ ನಿರುಪಾಧಿಕ-ನಿಃಕಳಂಕ-ನಿರಾಲಂಬ ಹಸ್ತದಿಂದ ಅರ್ಚಿಸಿ ಎರಡಳಿದು ನಿರಾವಯಸಮಾಧಿಯಲ್ಲಿ ಕೂಡುವ ನಿಜದಿರವ ನೋಡಸಂಗನಬಸವೇಶ್ವರ.