ಅಯ್ಯ, ಕುಂಡಲಾಕೃತಿ, ಶಿಕಾರಪ್ರಣಮ, ಭೇರಿನಾದ,
ಮಣಿಪೂರಕಚಕ್ರ, ಹರಿತವರ್ಣ, ಪ್ರಸಾದಿಸ್ಥಲ, ಕಾರಣತನು,
ನಿರಹಂಕಾರಹಸ್ತ, ಶಿವಲಿಂಗ, ನೇತ್ರಮುಖ, ಸಾವಧಾನಭಕ್ತಿ,
ಸುರೂಪುಪದಾರ್ಥ, ಸುರೂಪುಪ್ರಸಾದ,
ರುದ್ರಪೂಜಾರಿ, ರುದ್ರನಧಿದೇವತೆ,
ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ,
ಶರೀರಸ್ಥವೆಂಬ ಸಂಜ್ಞೆ, ಉತ್ತರದಿಕ್ಕು,
ಸಾಮವೇದ, ಅಗ್ನಿಯೆ ಅಂಗ,
ಪರಮಾತ್ಮ, ಇಚ್ಛಾಶಕ್ತಿ, ವಿದ್ಯಾಕಲೆ -
ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು
ಎನ್ನ ಮಣಿಪೂರಕಚಕ್ರವೆಂಬ ಪಂಪಾಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ
ನಿರೀಕ್ಷಣಸ್ವರೂಪವಾದ ಶಿವಲಿಂಗವೆ ಶ್ರೀವಿರೂಪಾಕ್ಷಲಿಂಗವೆಂದು
ಆತ್ಮತ್ರಯವ ಮಡಿಮಾಡಿ,
ಪರಮಾನಂದವೆಂಬ ಜಲದಿಂ ಮಜ್ಜನಕ್ಕೆರದು,
ಅಗ್ನಿ ನಿವೃತ್ತಿಯಾದ ಗಂಧವ ಧರಿಸಿ,
ಅಹಂಕಾರ ನಿರಹಂಕಾರವಾದಕ್ಷತೆಯನಿಟ್ಟು,
ಅಲ್ಲಿಹ ದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ,
ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಹ ಹರಿತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ,
ಅಲ್ಲಿಹ ಸುಷುಪ್ತಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ,
ನಿರ್ಲೋಭವೆಂಬಾಭರಣವ ತೊಡಿಸಿ,
ಸುರೂಪವೆಂಬ ನೈವೇದ್ಯವನರ್ಪಿಸಿ,
ಸಾವಧಾನವೆಂಬ ತಾಂಬೂಲವನಿತ್ತು,
ಇಂತು ಶಿವಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ,
ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಶಿವಲಿಂಗವನ್ನು
ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು
ಆ ಶಿವಲಿಂಗದ ಪೂಜೆಯ ಸಮಾಪ್ತವ ಮಾಡಿ,
ಓಂ ಶಿಂ ಶಿಂ ಶಿಂ ಶಿಂ ಶಿಂ ಶಿಂ ಎಂಬ
ಶಿಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ,
ಆ ಶಿವಲಿಂಗವೆ ತಾನೆಂದರಿದು ಕೂಡಿ ಎರಡಳಿದು
ನಿಃಕಳಂಕನಾಗಿ ಆಚರಿಸಬಲ್ಲಾತನೆ
ಸಾವಧಾನಭಕ್ತಿಯನುಳ್ಳ ಶಿವಪ್ರಸಾದಿ ನೋಡ
ಸಂಗನಬಸವೇಶ್ವರ.
Art
Manuscript
Music
Courtesy:
Transliteration
Ayya, kuṇḍalākr̥ti, śikārapraṇama, bhērināda,
maṇipūrakacakra, haritavarṇa, prasādisthala, kāraṇatanu,
nirahaṅkārahasta, śivaliṅga, nētramukha, sāvadhānabhakti,
surūpupadārtha, surūpuprasāda,
rudrapūjāri, rudranadhidēvate,
mūrtisādākhya, ānandavemba lakṣaṇa,
śarīrasthavemba san̄jñe, uttaradikku,
sāmavēda, agniye aṅga,
paramātma, icchāśakti, vidyākale -
intu ippattunālku sakīlaṅgaḷanoḷakoṇḍu
enna maṇipūrakacakravemba pampākṣētradalli mūrtigoṇḍirda
Nirīkṣaṇasvarūpavāda śivaliṅgave śrīvirūpākṣaliṅgavendu
ātmatrayava maḍimāḍi,
paramānandavemba jaladiṁ majjanakkeradu,
agni nivr̥ttiyāda gandhava dharisi,
ahaṅkāra nirahaṅkāravādakṣateyaniṭṭu,
alliha daśadaḷaṅgaḷane puṣpadamāleyendu dharisi,
alliha kamalasadvāsaneya dhūpava bīsi,
alliha haritavarṇave karpūrada jyōtiyendu beḷagi,
alliha suṣuptāvastheyemba navīnavastrava hoddisi,
nirlōbhavembābharaṇava toḍisi,
surūpavemba naivēdyavanarpisi,
sāvadhānavemba tāmbūlavanittu,
intu śivaliṅgakke aṣṭavidhārcaneyaṁ māḍi,
Kōṭisūryana prabheyante beḷaguva śivaliṅgavannu
kaṅgaḷu tumbi nōḍi, manadalli santōṣaṅgoṇḍu
ā śivaliṅgada pūjeya samāptava māḍi,
ōṁ śiṁ śiṁ śiṁ śiṁ śiṁ śiṁ emba
śikāra ṣaḍvidhamantraṅgaḷinde namaskarisi,
ā śivaliṅgave tānendaridu kūḍi eraḍaḷidu
niḥkaḷaṅkanāgi ācarisaballātane
sāvadhānabhaktiyanuḷḷa śivaprasādi nōḍa
saṅganabasavēśvara.