ಅಯ್ಯ, ಇಂತು ನಿರವಯ ಶೂನ್ಯಲಿಂಗಾನುಭಾವ
ಸ್ಥಲಾಚರಣೆಯ ಕರ್ತೃ ಗುರುಬಸವೇಶ್ವರಸ್ವಾಮಿಗಳ
ಪಾದೋದಕ ಪ್ರಸಾದದ ಬೆಳಗಿನೊಳಗೆ ಬೆಳಗಾದರು ನೋಡ
ಪ್ರಭುಸ್ವಾಮಿಗಳು.
ಪ್ರಭುಸ್ವಾಮಿಗಳ ಪಾದೋದಕ-ಪ್ರಸಾದದ
ನಿಜಚಿದ್ಬೆಳಗಿನೊಳಗೆ ಬೆಳಗಾದರು ನೋಡ
ಗುರುಬಸವೇಶ್ವರಸ್ವಾಮಿಗಳು.
ಇವರಿಬ್ಬರ ಪಾದೋದಕ-ಪ್ರಸಾದದ ಚಿದ್ಬೆಳಗಿನೊಳಗೆ
ಚನ್ನಬಸವಣ್ಣ, ನಿರ್ಲಜ್ಜಶಾಂತಲಿಂಗೇಶ್ವರ, ಸಿದ್ಧರಾಮ
ಮೊದಲಾದ ಸಕಲಪ್ರಮಥಗಣಂಗಳೆಲ್ಲ
ಬಯಲೊಳಗೆ ಮಹಾಬಯಲಾದರು ನೋಡ.
ಇಂತು ಜೋಗೈಸಿ ಏಕಸಮರಸವಾದ
ಬಸವ-ಪ್ರಭು-ಚನ್ನಬಸವಣ್ಣ-ಪ್ರಮಥಗಣಂಗಳ
ಪಾದೋದಕ-ಪ್ರಸಾದನೆ ರೂಪಾಗಿ,
ಗುರುಸಿದ್ಧ-ಸಂಗನಬಸವಣ್ಣನೆಂಬಭಿಧಾನದಿಂದವತರಿಸಿ
ಚಿದ್ಘನ ಮಹಾಂತ ಪ್ರಮಥಗಣಂಗಳ ಕೃಪಾದೃಷ್ಟಿಯಿಂದ
ಸರ್ವಸಂಗಪರಿತ್ಯಾಗಸ್ಥಲ ಮೊದಲಾಗಿ
ನಿರಾವಯ ಶೂನ್ಯಲಿಂಗಾನುಭಾವಸ್ಥಲ ಕಡೆಯಾದ
ನವಸ್ಥಲಂಗಳೊಳಗೆ ಎರಡೆಂಬತ್ತೆಂಟುಕೋಟಿ ವಚನಾನುಭಾವದ
ಸುಧಾರಸ್ವಾನುಭಾವ ಸೂತ್ರಕ್ಕೆ ಬೆಟ್ಟದ ನೆಲ್ಲಿ ಘಟ್ಟದ ಉಪ್ಪು
ಕೂಡಿದೋಪಾದಿಯಲ್ಲಿ ಯೋಗ್ಯವಾದೇವು ನೋಡ
ಸಂಗನಬಸವೇಶ್ವರ.
Art
Manuscript
Music
Courtesy:
Transliteration
Ayya, intu niravaya śūn'yaliṅgānubhāva
sthalācaraṇeya kartr̥ gurubasavēśvarasvāmigaḷa
pādōdaka prasādada beḷaginoḷage beḷagādaru nōḍa
prabhusvāmigaḷu.
Prabhusvāmigaḷa pādōdaka-prasādada
nijacidbeḷaginoḷage beḷagādaru nōḍa
gurubasavēśvarasvāmigaḷu.
Ivaribbara pādōdaka-prasādada cidbeḷaginoḷage
cannabasavaṇṇa, nirlajjaśāntaliṅgēśvara, sid'dharāma
modalāda sakalapramathagaṇaṅgaḷella
bayaloḷage mahābayalādaru nōḍa.
Intu jōgaisi ēkasamarasavāda
Basava-prabhu-cannabasavaṇṇa-pramathagaṇaṅgaḷa
pādōdaka-prasādane rūpāgi,
gurusid'dha-saṅganabasavaṇṇanembabhidhānadindavatarisi
cidghana mahānta pramathagaṇaṅgaḷa kr̥pādr̥ṣṭiyinda
sarvasaṅgaparityāgasthala modalāgi
nirāvaya śūn'yaliṅgānubhāvasthala kaḍeyāda
navasthalaṅgaḷoḷage eraḍembatteṇṭukōṭi vacanānubhāvada
sudhārasvānubhāva sūtrakke beṭṭada nelli ghaṭṭada uppu
kūḍidōpādiyalli yōgyavādēvu nōḍa
saṅganabasavēśvara.