Index   ವಚನ - 96    Search  
 
ಅಯ್ಯ, ಇದೆ ಮಹಾಪ್ರಭುವಿನ ಮಹಾಪ್ರಸಾದನುಸಂಧಾನದಿಂದ ಶಾಂಭವಲೋಕದ ಶಾಂಭವಗಣಂಗಳು, ಶಿವಲೋಕದ ಶಿವಗಣಂಗಳು, ರುದ್ರಲೋಕದ ರುದ್ರಗಣಂಗಳು, ನಾಗಲೋಕದ ನಾಗಗಣಂಗಳು ದೇವಲೋಕದ ದೇವಗಣಂಗಳು, ಮರ್ತ್ಯಲೋಕದ ಮಹಾಗಣಂಗಳು ಮುಂತಾಗಿ ನಿಜಾಚರಣೆ ಲಿಂಗಲೋಲುಪ್ತರಾಗಿ, ಬಯಲೊಳಗೆ ಮಹಾಬಯಲಾದರು ನೋಡ ಸಂಗನಬಸವೇಶ್ವರ.