Index   ವಚನ - 18    Search  
 
ಇದಕ್ಕೆ ನಿರ್ವಚನ : ಅರಿಷಡ್ವರ್ಗವೆಂಬ ಆರು ನಾಯಿಗಳ ಮರ್ದಿಸಿ, ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧ ನರಿಯ ಸೂರೆಗೊಂಡು, ಸಪ್ತವ್ಯಸನಂಗಳೆಂಬ ಏಳುಬೆಕ್ಕಿನ ಮೂಲವಂ ಕೆಡಿಸಿ, ಹಸಿವು ತೃಷೆ ನಿದ್ರೆ ಜಾಡ್ಯವೆಂಬ ಸೂಕರಂಗಳ ಕೊಂದು, ಪಂಚವರ್ಣದ ಹುಲಿಯ ಆರ್ಭಟವಂ ಮುರಿದು, ಸಪ್ತಧಾತುಗಳೆಂಬ ಏಳುಮಂದಿ ಹೊಲೆಯರ ಸೂತಕವಂ ಕಳೆದು, ನಾನು ನೀನೆಂಬ ಅಹಂಕಾರವ ನಷ್ಟವ ಮಾಡಿ, ಸುಜ್ಞಾನವೆಂಬ ಜಾಗಟೆಯ ಪಿಡಿದು ಅರಿವೆಂಬ ಕುಡಿಯಲ್ಲಿ ನುಡಿಸಿ, ಪರಮ ಪರಿಣಾಮವೆಂಬ ನಾದದ ಮರೆಯಲ್ಲಿ ಪ್ರಸಾದವಂ ಕೊಂಡು ಸುಖಿಸುವ ಸರ್ವಕಾರರ ನೋಡಿ ಅಹುದಹುದೆಂದು ಅಭಯಹಸ್ತವ ಕೊಡುತ್ತಿದ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.