Index   ವಚನ - 19    Search  
 
ಇಂದ್ರದಳದಲ್ಲಿ ಪುಣ್ಯ, ಅಗ್ನಿದಳದಲ್ಲಿ ಪಾಪ, ಯಮದಳದಲ್ಲಿ ಗಮನ, ನೈರುತ್ಯದಳದಲ್ಲಿ ನಿರ್ಗಮನ, ವರುಣದಳದಲ್ಲಿ ಅಸನ, ವಾಯುವ್ಯದಳದಲ್ಲಿ ವ್ಯಸನ, ಕುಬೇರದಳದಲ್ಲಿ ವಿಷಯ, ಈಶಾನ್ಯದಳದಲ್ಲಿ ನಿದ್ರೆ, ಮಧ್ಯದಳದಲ್ಲಿ ಗುಣಭರಿತನಾಗಿಹನು. ಊರ್ಧ್ವದಳದಲ್ಲಿ ಸುಜ್ಞಾನಭರಿತನು ತಾನೆ [ಗೊಹೇಶ್ವರ]ಪ್ರಿಯ ನಿರಾಳಲಿಂಗ.