Index   ವಚನ - 21    Search  
 
ಇದರ ನಿರ್ವಚನ : ಬ್ರಹ್ಮೇಶ್ವರಿ ವಿಷ್ಣೇಶ್ವರಿ ರುದ್ರೇಶ್ವರಿ ಮಹೇಶ್ವರಿಯೆಂಬ ಆ ರುದ್ರಶಕ್ತಿಸಹ ಸಪ್ತವ್ಯಸನಂಗಳೆಂಬ ಮೆಟ್ಟನಿಕ್ಕಿ, ಪ್ರಣಮವೆಂಬ ವೀಣೆಯ ವಿಸ್ತರಿಸಿ, ಸಪ್ತಸ್ಥಾನದಲ್ಲಿ ಎಳೆಯಂ ಬಿಗಿದು, ಹಂಸ ಹಂಸವೆಂಬ ಬೆರಳಲ್ಲಿ ನುಡಿಸುತ್ತ ಗೊಹೇಶ್ವರನಾಳಾಪದಲ್ಲಿ ಮಹಾ ಮಹಾತ್ಮನೆಂಬ ವಚನವ ಪಾಡುತ್ತ ಉರಿಗೆಂಡದ ಕಣ್ಣತೆರೆದು, ವಕ್ರಂಗಳ ವಿಸರ್ಜಿಸಿ, ಕಂಗಳ ಮುಚ್ಚಿ, ಸದೈಶ್ವರಿಯ ಸರವಿಗೈದು ಪರಸ್ಥಾನದಲ್ಲಿ ಒಲದಾಡುತಿರ್ದ ಜೋಗಿಯಂ ಕಂಡು, ಸಾರಾಯ ಸಂತೋಷಮಂ ಮಾಡುತ್ತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.