Index   ವಚನ - 22    Search  
 
ಇನ್ನು ಗುರುಸ್ಥಲದ ವಚನ : ಗುರುಹೃದಯ ಚಿನ್ಮಯಯೆನಲಂಜುವೆನಯ್ಯ ! ಗುರುವೆನ್ನ ಆತ್ಮದಿಂದ ಮೊಳೆಯದೋರಿದನಾಗಿ. ನಾನು ಪಾವನವೆಂಬೆನಯ್ಯ, ಎನ್ನ ಪಾಪಕಂಜುವೆನಯ್ಯ, ಆ ಗುರುವಿನ ಕರಸ್ಥಳದಿಂದ ಉದುಭವಿಸಿದೆನಾಗಿ. ಇಂತೀ ಉಭಯದ ಉತ್ಪತ್ಯ ಸಂಗನ ಶರಣ ಬಸವಣ್ಣನ ಸಂತತಿಗಳಿಲ್ಲದೆ ಶಬ್ದಪಾಠಕರಿಗೆ ಅರಿಯಬಾರದಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗ.