Index   ವಚನ - 24    Search  
 
ಫಲವನಳಿದವಂಗೆ ಕುಲದ ಹಂಗೇತಕಯ್ಯಾ? ಗುರುಭಕ್ತನಾದ ಮೇಲೆ ಜಂಗಮದ ಹಂಗೇತಕಯ್ಯಾ? ಪ್ರಾಣಲಿಂಗದ ಹೊಲಬನರಿತವಂಗೆ ಇಷ್ಟಲಿಂಗದ ಹಂಗೇತಕಯ್ಯಾ? ಇಂತೀ ಕರಣಂಗಳನರಿಯದೆ ಉದಾಸೀನವೆಂದು ಚರಿಸುವ ಬೂಟಕರ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.