Index   ವಚನ - 23    Search  
 
ಇನ್ನು ಪ್ರಾಣಲಿಂಗಿಸ್ಥಲದ ವಚನ : ಪ್ರಾಣಲಿಂಗವ ಬಲ್ಲೆವೆಂಬ ಅಣ್ಣಗಳು ನೀವು ಕೇಳಿರೊ. ಪವನದ ಮೂಲವನರಿಯಬಲ್ಲರೆ ಭಕ್ತನೆಂದೆನಿಸಬಹುದು. ಪ್ರಾಣನಿದ್ದ ನೆಲೆಯನರಿತು ಪ್ರಣಮದ ಸಂಬಂಧವ ಮಾಡಬಲ್ಲರೆ ಪ್ರಾಣಲಿಂಗಿಯೆಂದೆನಿಸಬಹುದು. ಹಿಂದಣ ದ್ವಾರವಂ ತೆರೆದು, ಮುಂದಣ ಮುಪ್ಪುರದ ಬಟ್ಟೆಯಂ ಮೆಟ್ಟಿ, ತ್ರಿಕೂಟವೆಂಬ ಸಂದಿಯಲ್ಲಿ ಹೊಕ್ಕು, ಮಹಾಲಿಂಗವ ನಿರೀಕ್ಷಣವ ಮಾಡಿ, ಶ್ರೀಗುರುವಿನ ಚರಣಾಂಬುಜವ ನೋಡಲಿಕ್ಕಾಗಿ ಮಹಾಜ್ಯೋತಿರ್ಮಯವೆಂಬ ಜಂಗಮವು ಸಿಕ್ಕಿತಯ್ಯಾ. ಆ ಜಂಗಮದ ಒಕ್ಕುಮಿಕ್ಕ ಪ್ರಸಾದವಂ ಸವಿದು ನಿತ್ಯಶರಣರ ಚರಣಕ್ಕೆ ನಮೋ ನಮೋ ಎನುತಿರ್ದೆ ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗ.