ಆಯತ ಸ್ವಾಯತ ಸನ್ನಿಹಿತನಾಗಿ,
ಆರಾಧ್ಯಲಿಂಗದಲ್ಲಿ ಅನುಭಾವಿಯಾಗಿಪ್ಪನು ಬಸವಣ್ಣನು.
ಜಂಗಮಲಿಂಗ ಪ್ರಾಣಿಯಾಗಿ ನಿಷ್ಪ್ರಾಣವಾಗಿಪ್ಪನು ಬಸವಣ್ಣನು.
ಗುಹೇಶ್ವರಲಿಂಗದಲ್ಲಿ,
ಸಂಗನಬಸವಣ್ಣನ ಆಚಾರದ ಪರಿ
ನಿನಗಲ್ಲದೆ ಅರಿಯಬಾರದು.
ಎನಗೊಮ್ಮೆ ತಿಳುಹಿಕೊಡ ಚೆನ್ನಬಸವಣ್ಣಾ.
Transliteration Āyata svāyata sannihitanāgi,
ārādhyaliṅgadalli anubhāviyāgippanu basavaṇṇanu.
Jaṅgamaliṅga prāṇiyāgi niṣprāṇavāgippanu basavaṇṇanu.
Guhēśvaraliṅgadalli,
saṅganabasavaṇṇana ācārada pari
ninagallade ariyabāradu.
Enagom'me tiḷuhikoḍa cennabasavaṇṇā.
Hindi Translation आयत स्वायत सन्निहित बने,
आराध्य लिंग में अनुभावी बना है बसवण्णा ने।
जंगम लिंग प्राणि बने निष्प्राण बना है बसवण्णा ने
गुहेश्वर लिंग में,
संगनबसवण्णा केआचार की रीति तेरे बिना न जानता।
मुझे एक बार समझा दो चेन्नबसवण्णा
Translated by: Eswara Sharma M and Govindarao B N