ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ
ತಲೆಕೆಳಗೆ ಮಾಡಿ ತಪಸ್ಸವ ಮಾಡಿದಡಿಲ್ಲ,
ಕಾಲಕರ್ಮಂಗಳ ದಂಡಿಸಿದಡಿಲ್ಲ,
ಪೃಥ್ವಿ ತಿರುಗಿ, ತೀರ್ಥಂಗಳ ಮಿಂದು,
ನಿತ್ಯನೇಮಂಗಳ ಮಾಡಿದಡಿಲ್ಲ,
ಜಲಸಮಾಧೀಯಲ್ಲಿ ಕುಳಿತಡಿಲ್ಲ,
ಇದಕ್ಕೆ ಶ್ಲೋಕ :
"ಪೂಜಾ ಕೋಟಿ ಸಮಂ ಸ್ತೋತ್ರಂ ಸ್ತೋತ್ರ ಕೋಟಿ ಸಮಂಜಪಃ|
ಜಪ ಕೋಟಿ ಸಮಂ ಧ್ಯಾನಂ ಧ್ಯಾನಕೋಟಿ ಮನೋಲಯಂ||"
ಇಂತೆಂದುದಾಗಿ, ಸುತ್ತಿಸುಳಿವ ಮನವನು ಚಿತ್ತದಲ್ಲಿರಿಸಿ
ನಿಶ್ಚಿಂತವಾದಡೆ ನಿತ್ಯಪ್ರಕಾಶ ಗುರು ಗುಹೇಶ್ವರಲಿಂಗವು
ಮತ್ತೆ ಅರಸಲುಂಟೇನಯ್ಯಾ ?
ಮಠವ್ಯಾಕೊ, ಪರ್ವತವ್ಯಾಕೊ, ಜನವ್ಯಾಕೋ, ನಿರ್ಜನವ್ಯಾಕೊ
ಚಿತ್ತ ಸಮಾಧಾನವುಳ್ಳ ಪುರುಷಂಗೆ ?
ಹೊರಗಣ ಧ್ಯಾನ ಮೌನ ಜಪತಪ ನಿತ್ಯನೇಮಂಗಳ್ಯಾಕೊ
ತನ್ನ ತಾನರಿದ ಶರಣಂಗೆ
ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ ?
Art
Manuscript
Music
Courtesy:
Transliteration
Aruhina kuruha kāṇade giri kōḍagalla mēle
talekeḷage māḍi tapas'sava māḍidaḍilla,
kālakarmaṅgaḷa daṇḍisidaḍilla,
pr̥thvi tirugi, tīrthaṅgaḷa mindu,
nityanēmaṅgaḷa māḍidaḍilla,
jalasamādhīyalli kuḷitaḍilla,
idakke ślōka:
Pūjā kōṭi samaṁ stōtraṁ stōtra kōṭi saman̄japaḥ|
japa kōṭi samaṁ dhyānaṁ dhyānakōṭi manōlayaṁ||
intendudāgi, suttisuḷiva manavanu cittadallirisi
niścintavādaḍe nityaprakāśa guru guhēśvaraliṅgavu
Matte arasaluṇṭēnayyā?
Maṭhavyāko, parvatavyāko, janavyākō, nirjanavyāko
citta samādhānavuḷḷa puruṣaṅge?
Horagaṇa dhyāna mauna japatapa nityanēmaṅgaḷyāko
tanna tānarida śaraṇaṅge
nam'ma gohēśvarapriya nirāḷaliṅga?