ಕಳ್ಳಆಡಿನ ಕಾಲ ಕಡಿದು, ಕೋಡಗನ ಹಲ್ಲುಕಿತ್ತು,
ಓಡ್ಯಾಡುವ ಎರಳೆಯ ತಿರುಳ ತಿಂದು,
ಉಡುವಿನ ಕುಡಿನಾಲಗೆಯ ಕೂಡೆವೆಡವರಿದು ತಿಂದು,
ದಿನವ ಕಳಿದುಳಿದಾತ ಎನ್ನ ಗುರುವು.
ಯಾತಕೆಂದರೆ ಅರಿಕೇಶ್ವರಲಿಂಗವನರಿವುದಕ್ಕೆ ತೆರಪಾಗಿರಣ್ಣಾ
ಗೊಹೇಶ್ವರಪ್ರಿಯ ನಿರಾಳಲಿಂಗಾ.
Art
Manuscript
Music
Courtesy:
Transliteration
Kaḷḷa'āḍina kāla kaḍidu, kōḍagana hallukittu,
ōḍyāḍuva eraḷeya tiruḷa tindu,
uḍuvina kuḍinālageya kūḍeveḍavaridu tindu,
dinava kaḷiduḷidāta enna guruvu.
Yātakendare arikēśvaraliṅgavanarivudakke terapāgiraṇṇā
gohēśvarapriya nirāḷaliṅgā.