Index   ವಚನ - 42    Search  
 
ದಾನಿಯಾದಡೇನು? ಅವನ ಬೇಡಿದಲ್ಲದೆ ಅರಿಯಬಾರದು. ರಣರಂಗ ಧೀರನಾದಡೇನು? ಅಲಗು ಅಲಗು ಹಳಚಿದಲ್ಲದೆ ಅರಿಯಬಾರದು. ಗೆಳೆಯನಾದಡೇನು? ಅಗಲಿದಲ್ಲದೆ ಅರಿಯಬಾರದು. ಹೇಮವಾದಡೇನು? ಒರೆಗಲ್ಲುಯಿಲ್ಲದೆ ಅರಿಯಬಾರದು. ನಿನ್ನನರಿದೆಹೆನೆಂದಡೆ: ಸಂಸಾರ ಸಾಗರವ ದಾಟಿದಲ್ಲದೆ ಅರಿಯಬಾರದು ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗಾ.