Index   ವಚನ - 43    Search  
 
ಬರಿದೆ ಶಿವಶಿವಯೆಂದಡೆ ಭವಹಿಂಗಿತೆಂಬುವ ಅರಿವುಗೇಡಿಯ ಮಾತ ಕೇಳಲಾಗದು. ಅದೇನು ಕಾರಣವೆಂದಡೆ: ಕತ್ತಲಮನೆಯಲ್ಲಿ ಜ್ಯೋತಿಯ ನೆನೆದರೆ ಪ್ರಕಾಶವಾಗಬಲ್ಲುದೆ? ಕಾಮಜ್ವರದವರು ರಂಭೆಯ ನೆನದರೆ ಕಾಮಜ್ವರ ತಂಬಿಸಬಲ್ಲುದೆ? ಇಂತೀ ನರಗುರಿಗಳಾಡಿದುದ ಕಂಡು ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.