ಅಂಗವೆ ಶರಣನಾದ ನಿಮಿತ್ಯದಲ್ಲಿ
ಶರಣನ ಸರ್ವೇಂದ್ರಿಯಂಗಳೆಲ್ಲ
ಲಿಂಗಮುಖ ಗುಟಕಿಯ[ಲ್ಲದೆ ಅನ್ಯ ಗುಟಕಿಯ ಕೊಂಡರೆ]
ಅಲ್ಲಿಯ ಹೀನ ಹುಯ್ಯಲಂಗಳ ಗುಟಕಿಯ ತೆಗೆದುಕೊಂಡಂತೆ,
ಶರಣನ ಅಂಗದಲ್ಲಿ ಸೋಂಕಿದ ಸುಖಂಗಳೆಲ್ಲ
ಲಿಂಗಮಯವೆಂದರಿಯದೆ
ಲಿಂಗವ ಬೇರೆ ಇಟ್ಟು ಕೊಟ್ಟುಕೊಂಬೆನೆಂಬ ಕುನ್ನಿಗಳಿಗೆ
ಶಿವಲಿಂಗ ಮುನ್ನವಿಲ್ಲವೆಂದ ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Aṅgave śaraṇanāda nimityadalli
śaraṇana sarvēndriyaṅgaḷella
liṅgamukha guṭakiya[llade an'ya guṭakiya koṇḍare]
alliya hīna huyyalaṅgaḷa guṭakiya tegedukoṇḍante,
śaraṇana aṅgadalli sōṅkida sukhaṅgaḷella
liṅgamayavendariyade
liṅgava bēre iṭṭu koṭṭukombenemba kunnigaḷige
śivaliṅga munnavillavenda nim'ma śaraṇa
cennayyapriya nirmāyaprabhuve.