Index   ವಚನ - 19    Search  
 
ಶಿವಲಿಂಗ ಸಂಸಾರಸಂಪನ್ನ ಶರಣನು ಲಿಂಗಮುಖದಲ್ಲಿ ಭೋಗಿಸುತ್ತಿಹನು ಮುಟ್ಟಿದ ಸುಖಂಗಳನೆಲ್ಲ. ಲಿಂಗ ಬೇರೆ ಶರಣ ಬೇರೆ ಎಂದು ನುಡಿವ ಅಸಂಸ್ಕಾರಿ ಭೂತದೇಹಿಗಳು ಭಕ್ತ ಜಂಗಮರೆಂದು ಮುಖವ ನೋಡಿದರೆ ಹಂದಿಯ ಜನ್ಮ ತಪ್ಪದೆಂದು ಶ್ರುತಿ ಸಾರುತಿದೆ: 'ಪ್ರೇತಲಿಂಗ ಸಂಸ್ಕಾರಿಣಾಂ ಭೂತಪ್ರಾಣಿ ನಜಾಯತೇ | ಪ್ರಭುತೇ ಮುಖಂ ದೃಷ್ಟ್ವಾ ಕೋಟಿಜನ್ಮನಿ ಸೂಕರಃ||' ಇಂತು ಪ್ರೇತಲಿಂಗ ಸವಳು ಭುಂಜಿಸುವುದಲ್ಲದೆ ದ್ವಯವಲ್ಲದೆ ಪ್ರಸಾದವಲ್ಲವೆಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.