Index   ವಚನ - 36    Search  
 
ಪ್ರಸಾದ[ವ ಕೊಂಡೆ] ಪ್ರಸಾದ[ವ ಕೊಂಡೆ]ನೆಂಬಿರಿ ಪ್ರಸಾದ ಕೆಡುವುದೆ? ಪ್ರಸಾದ ಒಮ್ಮೆ ಸುಗಂಧ, ಒಮ್ಮೆ ದುರ್ಗಂಧವೆ? ಪ್ರಸಾದವು ಶಬ್ದ ಸ್ಪರ್ಶಶ ರೂಪು ರಸ ಗಂಧಕ್ಕೆ ಅತೀತವು. ಓಗರ ಪ್ರಸಾದವೆಂದು ಕೊಂಡು ರೋಗ ಬಂದಿತ್ತೆಂದು ವೈದ್ಯಕಾರರ ಬಳಿಗೆ ಹೋಗಿ ವೈದ್ಯವ ಕೊಂಡು, ಮಲಬದ್ಧ ಭಾಂಡವ ತೊಳೆದು ರೋಗವು ಹೋಯಿತ್ತೆಂದು ನಲಿನಲಿದಾಡಿ ಭಕ್ತ ಜಂಗಮರು ತಾವೆಂದು ನುಡಿವ ಮುಚ್ಚಟ ಮುದಿನಾಯಿಗಳ ಮೂಗ ಕೊಯ್ಯದೆ ಮಾಣ್ಬನೆ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.